
3rd December 2024
ಯಳಂದೂರು ತಾಲ್ಲೂಕು ಮಟ್ಟದ ಕೃಷಿಕ ಸಮಾಜದ ಚುನಾವಣೆ ಡಿ.15ಕ್ಕೆ ನಿಗಧಿ
ಯಳಂದೂರು ತಾಲ್ಲೂಕು ಮಟ್ಟದ ಕೃಷಿಕ ಸಮಾಜದ ಚುನಾವಣೆ ಡಿ.15ಕ್ಕೆ ನಿಗದಿಯಾಗಿದ್ದು, ಈ ಕುರಿತು ವಿವರಗಳನ್ನು ಈಗಾಗಲೇ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಕೃಷಿಕ ಸಮಾಜದ 5 ವರ್ಷಗಳ ಅವಧಿಗೆ ಕಾರ್ಯಕಾರಿ ಸಮಿತಿ ರಚನೆ ಹಾಗೂ ಪದಾಧಿಕಾರಿಗಳ ಆಯ್ಕೆಗೆ ತಾಲ್ಲೂಕು ಮಟ್ಟದ ಕೃಷಿಕ ಸಮಾಜದ ಚುನಾವಣೆಯನ್ನು ಕೃಷಿ ಇಲಾಖೆ ನಡೆಸಲಿದೆ. ತಾಲ್ಲೂಕು ಮಟ್ಟದ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಗೆ ಇಚ್ಚಿಸಿ, ಚುನಾವಣೆಯಲ್ಲಿ ಭಾಗವಹಿಸುವವರು ನ. 30 ರಿಂದ ನಾಮಪತ್ರ ಸ್ವೀಕರಿಸಿ, ಅಂದಿನಿಂದಲೇ ಕಛೇರಿಯಲ್ಲಿ ಸಲ್ಲಿಸಬಹುದಾಗಿದ್ದು, ಡಿ.6 ರಂದು ಸಂಜೆ 5 ಗಂಟೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ ಮತ್ತು ಇದೇ ದಿನ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ.
ಅಂತೆಯೇ, ನಾಮಪತ್ರ ಪರಿಶೀಲನೆ ಡಿ.7 ರಂದು ಬೆಳಗ್ಗೆ 11 ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದ್ದು, ನಂತರದಲ್ಲಿ ತಿರಸ್ಕಾರಗೊಂಡ ನಾಮಪತ್ರಗಳ ವಿವರವನ್ನು ಅಂದೇ ಕಛೇರಿಯಲ್ಲಿ ಪ್ರಕಟಿಸಲಾಗುವುದು. ಡಿ.9 ರಂದು ಮಧ್ಯಾಹ್ನ 3 ಗಂಟೆಯೊಳಗೆ ಉಮೇದುವಾರಿಕೆ ವಾಪಸ್ ಪಡೆಯಬಹುದಾಗಿದೆ. ನಂತರದಲ್ಲಿ ಸಂಜೆ 4.30 ಗಂಟೆಗೆ ಚುನಾವಣಾ ಕಣದಲ್ಲಿ ಉಳಿಯವ ಉಮೇದುವಾರರಿಗೆ ಚಿಹ್ನೆ ಹಂಚಿಕೆ, ಚುನಾಯಿತ ಕ್ರಮ ಸಂಖ್ಯೆ ನೀಡಲಾಗುವುದು.
ಉಳಿದಂತೆ ಚುನಾವಣೆ ಡಿ.15 ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆವರೆಗೆ ಮತದಾನ ಪ್ರಕ್ರಿಯೆ ಯಳಂದೂರು ತಾಲ್ಲೂಕು ಮಟ್ಟದ ಕೃಷಿಕ ಸಮಾಜದ ಚುನಾವಣೆ ಯಳಂದೂರು ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆವರೆಗೆ ಚುನಾವಣೆ ನಡೆಯಲಿದೆ ಹಾಗೂ ಮತ ಎಣಿಕೆ ಪ್ರಕ್ರಿಯೆ ಅಂದು ಸಂಜೆ ಒಳಗೆ ಮುಕ್ತಾಯಗೊಂಡು ಫಲಿತಾಂಶವೂ ಕಛೇರಿ ಸೂಚನಾ ಫಲಕದಲ್ಲಿ ಪ್ರಕಟಗೊಳ್ಳಲಿದೆ. ಯಳಂದೂರು ತಾಲ್ಲೂಕು ಮಟ್ಟದ ಕೃಷಿಕ ಸಮಾಜದ ಚುನಾವಣೆಯಲ್ಲಿ ಪಾಲ್ಗೊಳ್ಳಲು ಕೃಷಿಕ ಸಮಾಜದ 93 ಅಜೀವ ಸದಸ್ಯರಿದ್ದು, ಇವರು ಮಾತ್ರ ಚುನಾವಣೆಯಲ್ಲಿ ಭಾಗವಹಿಸಬಹುದಾಗಿದೆ. ಯಳಂದೂರು ತಾಲ್ಲೂಕು ಮಟ್ಟದ ಕೃಷಿಕ ಸಮಾಜದ ಚುನಾವಣಾಧಿಕಾರಿಯಾಗಿ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಎನ್. ಜಿ ಅಮೃತೇಶ್ವರ ನೇಮಕಗೊಂಡಿದ್ದಾರೆ.